ಅಡಿಕೆಯಲ್ಲಿ ಹರಳು ಉದುರಿ ಇಳುವರಿ ಕುಂಠಿತವಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ…

Follow us ಅಡಿಕೆಯಲ್ಲಿ ಹರಳು ಉದುರಲು ಕಾರಣವೇನು?? ಮಲೆನಾಡು, ಅರೆಮಲೆನಾಡು, ಕರಾವಳಿ ಪ್ರದೇಶ ಮತ್ತು ಬಯಲು ಸೀಮೆಯಲ್ಲಿ ಅಡಿಕೆ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೂ ಸಹ ಹಲವು ಹತ್ತು ಕಾರಣಗಳಿಂದ ಅಡಿಕೆ ಮರಗಳಿಂದ ಹೂ ಹಾಗೂ ವಿವಿಧ ಗಾತ್ರದ ಕಾಯಿಗಳು ಬಲಿಯುವುದಕ್ಕೆ ಮೊದಲೇ ಅಪಾರ ಸಂಖ್ಯೆಯಲ್ಲಿ ಉದುರುತ್ತವೆ. ನೀರು ಮತ್ತು ಪೋಷಕಾಂಶಗಳ ಕೊರತೆ, ಅಸಮರ್ಪಕ ನೀರಿನ ನಿರ್ವಹಣೆ, ಹವಮಾನ ವೈಪರೀತ್ಯ, ಕೀಟ ಮತ್ತು ರೋಗಗಳ ಬಾಧೆ ಹೂ ಮತ್ತು ಕಾಯಿ ಉದುರುವಿಕೆಗೆ ಮುಖ್ಯ ಕಾರಣಗಳಾಗಿರುತ್ತವೆ. ಕಾಯಿಗಳ ಉದುರುವಿಕೆಗೆ ಕಾರಣಗಳು…

Read More

ಅಡಿಕೆಯಲ್ಲಿ ಹಿಂಗಾರು ಒಣಗುತ್ತಿದೆಯೇ??? ಇಲ್ಲಿದೆ ಸಂಪೂರ್ಣ ಮಾಹಿತಿ…

Follow us ಅಡಿಕೆಯಲ್ಲಿ ಸಿಂಗಾರ/ಹಿಂಗಾರ ಒಣಗು ರೋಗದ ನಿರ್ವಹಣೆ ಅಡಿಕೆಯು ಭಾರತ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅಡಿಕೆ ಉತ್ಪನ್ನದಲ್ಲಿ ಭಾರತವು ಸ್ವಾವಲಂಬಿಯಾಗಿದ್ದು, ಪ್ರಸ್ತುತ ಕರ್ನಾಟಕದ 25 ಜಿಲ್ಲೆಗಳಲ್ಲಿ 5.0 ಲಕ್ಷ ಹೆಕ್ಟರ್‌ ಪ್ರದೇಶದಿಂದ 9.05 ಲಕ್ಷ ಟನ್‌ ಉತ್ಪಾದನೆ ಆಗುತ್ತಿದ್ದು ಭಾರತದ ಒಟ್ಟು ಉತ್ಪಾದನೆಯ ಶೇ.65 ರಷ್ಟು ಅಡಿಕೆ ಬೆಳೆ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಪಡೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ರೋಗಗಳ ಬಾಧೆಯಿಂದ ಇಳುವರಿ ಕುಂಠಿತವಾಗುತ್ತಿದ್ದು….

Read More

ಅಡಿಕೆಯಲ್ಲಿ ಕಾಯಿ ಕೊಳೆ ರೋಗ ಹೆಚ್ಚಾಗಿದೆಯೇ??ಇಲ್ಲಿದೆ ಸಂಪೂರ್ಣ ಮಾಹಿತಿ..

Follow us ಅಡಿಕೆ ಕೊಳೆ ರೋಗ ನಿರ್ವಹಣೆಗೆ ಮುನ್ಸೂಚನಾ ಕ್ರಮಗಳು ಈ ರೋಗವು ಫೈಟೋಪ್ಥೋರ ಮೇಡಿ ಎಂಬ ಶಿಲೀಂದ್ರದಿಂದ ಉಂಟಾಗುವುದು. ಈ ರೋಗಾಣುವಿನ ಬೀಜಗಳು ಸಾಮಾನ್ಯವಾಗಿ ಗಿಡದ ಹಿಂಗಾರಗಳಲ್ಲಿ ಅಥವಾ ಕಳೆದ ವರ್ಷ ಅಥವಾ ಹಿಂದಿನ ವರ್ಷ ಮರದ ಬುಡಭಾಗದಲ್ಲಿ ಬಿದ್ದಿರುವ ರೋಗಪೀಡಿತ ಕಾಯಿಗಳಲ್ಲಿ ಸುಪ್ತಾವಸ್ಥೆಯಲ್ಲಿದ್ದು ಮೊದಲ ಮಳೆ ಬಂದ 15-20 ದಿನಗಳ ನಂತರ ಮೊಳಕೆಯೊಡೆದು ಗಾಳಿಮುಖಾಂತರ ಹಿಂಗಾರಗಳಿಗೆ ಹರಡಿ ರೋಗವನ್ನುಂಟುಮಾಡುತ್ತದೆ. ಸಾಮಾನ್ಯವಾಗಿ ಈ ರೋಗದಿಂದ ಜುಲೈ ತಿಂಗಳಲ್ಲಿ ಎಳೆಕಾಯಿ ಉದುರುವಿಕೆ, ಆಗಸ್ಟ್‌ ತಿಂಗಳಲ್ಲಿ ಅರೆಬಲಿತ ಕಾಯಿಗಳಲ್ಲಿ…

Read More

ನಿಮ್ಮ ತೋಟದಲ್ಲಿ ಎಲೆಚುಕ್ಕೆ ರೋಗ ಹೆಚ್ಚಾಗಿದೆಯೇ?? ಹೇಗೆ ನಿರ್ವಹಣೆ ಮಾಡಬೇಕೆಂದು ಯೋಚಿಸುತ್ತಿದ್ದೀರಾ??? ಇಲ್ಲಿದೆ ಸಂಪೂರ್ಣ ಮಾಹಿತಿ…

Follow Us ಅಡಿಕೆ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರಾಂತ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆಗೆ ದೊರೆಯುತ್ತಿರುವ ಹೆಚ್ಚಿನ ಮೌಲ್ಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯೆತ್ತ ಒಲವು ತೋರುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ 7.30 ಲಕ್ಷ ಆಕ್ಟರ್ ಪ್ರದೇಶದಿಂದ 9. 02 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದ್ದು. ಭಾರತದಲ್ಲಿ ಅತಿ ಹೆಚ್ಚು ಅಡಿಕೆಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದ್ದು (65% ರಷ್ಟು) ನಂತರದ ಸ್ಥಾನದಲ್ಲಿ ಕೇರಳ…

Read More

2016 ರಿಂದ 2025 ರ ವರೆಗೆ ಬೆಳೆ ವಿಮೆ ಎಷ್ಟು ಬಂದಿದೆ ಎಂದು ತಿಳಿದುಕೊಳ್ಳಬೇಕೆ??

Follow us ನಿಮ್ಮ ಬೆಳೆ ವಿಮೆ ಹಣ ಯಾವ ವರ್ಷದಲ್ಲಿ ಎಷ್ಟು ಬಂದಿದೆ ಅಥವಾ ಬಂದಿದೆಯೋ ಇಲ್ಲವೋ??ಎಂದು ನೀವೇ ಈ ಸುಲಭ ವಿಧಾನದಲ್ಲಿ ಹೀಗೆ ಮಾಡಿ ನಿಮ್ಮ ಬೆಳೆ ವಿಮೆ ಹಣದ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಮೊದಲು ಗೂಗಲ್ ನಲ್ಲಿ ಹೋಗಿ ಸಂರಕ್ಷಣೆ ಎಂದು ಟೈಪ್ ಮಾಡಿ ಅಥವಾ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ www.samrakshane.com ಈ ರೀತಿಯಾಗಿ ಪೇಜ್ ಓಪನ್ ಆಗುತ್ತದೆ ಇಲ್ಲಿ ನಿಮಗೆ ಯಾವ ವರ್ಷದ ಹಾಗೂ ಯಾವ ಹಂಗಾಮಿನ ಬೆಳೆ…

Read More

Poultry Shed Subsidy – ನರೇಗಾ ಯೋಜನೆಯಡಿ ಕೋಳಿ ಶೆಡ್ ನಿರ್ಮಾಣಕ್ಕೆ ₹60,000 ಸಹಾಯಧನ

Follow us ಗ್ರಾಮೀಣ ಪ್ರದೇಶದ ರೈತರು ಹಾಗೂ ಯುವಕರು ಹೆಚ್ಚುವರಿ ಆದಾಯಕ್ಕಾಗಿ ಕೋಳಿ ಸಾಕಾಣಿಕೆ (Poultry Farming) ಕಡೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೆ ಆರಂಭದಲ್ಲೇ ಕೋಳಿ ಶೆಡ್ ನಿರ್ಮಾಣಕ್ಕೆ ಹೆಚ್ಚಿನ ವೆಚ್ಚ ಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ನರೇಗಾ (MGNREGA) ಯೋಜನೆಯಡಿ ಕೋಳಿ ಶೆಡ್ ನಿರ್ಮಾಣಕ್ಕೆ ₹60,000 ವರೆಗೆ ಸಹಾಯಧನ ನೀಡಲಾಗುತ್ತಿದೆ. 🔸 ನರೇಗಾ ಯೋಜನೆ ಎಂದರೇನು? ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ಒದಗಿಸುವುದರ ಜೊತೆಗೆ,…

Read More

UAN ಸಂಖ್ಯೆ ಮರೆತಿದ್ದೀರಾ? ನಿಮ್ಮ UAN ನಂಬರ್ ಮರುಪಡೆಯಲು ಸರಳ ವಿಧಾನ ಇಲ್ಲಿದೆ

ಬಹುತೇಕ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ UAN ಸಂಖ್ಯೆ (Universal Account Number) ಬಹಳ ಮುಖ್ಯವಾಗಿದೆ. EPF ಖಾತೆ ಪರಿಶೀಲನೆ, ಪಾಸ್‌ಬುಕ್ ಡೌನ್‌ಲೋಡ್, ಹಣ ವಿತ್‌ಡ್ರಾ, KYC ಅಪ್ಡೇಟ್ ಮುಂತಾದ ಎಲ್ಲ ಕೆಲಸಗಳಿಗೆ UAN ಸಂಖ್ಯೆ ಅಗತ್ಯ. ಆದರೆ ಕೆಲವೊಮ್ಮೆ ಉದ್ಯೋಗಿಗಳು ತಮ್ಮ UAN ಸಂಖ್ಯೆಯನ್ನು ಮರೆತುಬಿಡುತ್ತಾರೆ. ಇಂತಹ ಸಂದರ್ಭಗಳಲ್ಲಿ ಚಿಂತೆ ಬೇಡ. ಸರ್ಕಾರವು UAN ಸಂಖ್ಯೆಯನ್ನು ಮರುಪಡೆಯಲು ಸುಲಭವಾದ ವ್ಯವಸ್ಥೆಯನ್ನು ಒದಗಿಸಿದೆ. UAN ಸಂಖ್ಯೆ ಎಂದರೇನು? UAN ಎಂದರೆ Universal Account Number.ಇದು EPFO…

Read More

ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನ ಯೋಜನೆ 2025: ಅರ್ಹ ವಿದ್ಯಾರ್ಥಿಗಳಿಗೆ ₹1 ಲಕ್ಷವರೆಗೆ ಆರ್ಥಿಕ ನೆರವು

ಇಂದಿನ ದಿನಗಳಲ್ಲಿ ಶಿಕ್ಷಣ ವೆಚ್ಚ ಹೆಚ್ಚುತ್ತಿರುವುದರಿಂದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸ ಮುಂದುವರಿಸುವುದು ಕಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ಮನಗಂಡು ಫೆಡರಲ್ ಬ್ಯಾಂಕ್ ವತಿಯಿಂದ ವಿಶೇಷ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು ₹1 ಲಕ್ಷವರೆಗೆ ವಿದ್ಯಾರ್ಥಿವೇತನ ಪಡೆದು ತಮ್ಮ ಶಿಕ್ಷಣಕ್ಕೆ ಆರ್ಥಿಕ ನೆರವು ಪಡೆಯಬಹುದು. ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನ ಎಂದರೇನು? ಫೆಡರಲ್ ಬ್ಯಾಂಕ್ ವಿದ್ಯಾರ್ಥಿವೇತನವು ಮೆರುಗು ಮತ್ತು ಆರ್ಥಿಕ ಅವಶ್ಯಕತೆ ಆಧಾರಿತವಾಗಿ ವಿದ್ಯಾರ್ಥಿಗಳಿಗೆ ನೀಡುವ ಸಹಾಯಧನವಾಗಿದೆ.ಈ ಯೋಜನೆಯ ಉದ್ದೇಶ ಪ್ರತಿಭಾವಂತ ವಿದ್ಯಾರ್ಥಿಗಳು ಹಣದ…

Read More

ಯಶಸ್ವಿನಿ ಆರೋಗ್ಯ ಯೋಜನೆ 2025: ಯಶಸ್ವಿನಿ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಆರಂಭ

ರಾಜ್ಯದಲ್ಲಿ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಆರೋಗ್ಯ ಚಿಕಿತ್ಸೆಯ ವೆಚ್ಚ ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಪ್ರಮುಖ ಯೋಜನೆಗಳಲ್ಲಿ ಯಶಸ್ವಿನಿ ಆರೋಗ್ಯ ಯೋಜನೆ ಪ್ರಮುಖವಾಗಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ನೀಡಲಾಗುತ್ತಿದ್ದು, ಇದರಿಂದ ಕಡಿಮೆ ವೆಚ್ಚದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶ ದೊರೆಯುತ್ತದೆ. ಈಗ ಯಶಸ್ವಿನಿ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಯಶಸ್ವಿನಿ ಕಾರ್ಡ್ ಎಂದರೇನು? ಯಶಸ್ವಿನಿ ಕಾರ್ಡ್ ಎಂದರೆ ಕರ್ನಾಟಕ ಸರ್ಕಾರದ ಆರೋಗ್ಯ…

Read More

ಬ್ಯಾಂಕ್ ಸಾಲ ಮುಕ್ತಿಗೊಳಿಸುವ ಹೊಸ ಅವಕಾಶ: ರಿಯಾಯಿತಿಯಲ್ಲಿ ಸಾಲ ಇತ್ಯರ್ಥಕ್ಕೆ OTS ಯೋಜನೆ ಜಾರಿ

ಬ್ಯಾಂಕಿನಿಂದ ಸಾಲ ಪಡೆದು ಆರ್ಥಿಕ ತೊಂದರೆಗಳಿಂದಾಗಿ ಮರುಪಾವತಿ ಮಾಡಲು ಸಾಧ್ಯವಾಗದೇ ಇರುವವರಿಗೆ ಇದೀಗ ದೊಡ್ಡ ಅವಕಾಶ ಬಂದಿದೆ. ಬ್ಯಾಂಕುಗಳು One Time Settlement (OTS) Scheme ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದ್ದು, ಇದರ ಮೂಲಕ ಸಾಲಗಾರರು ರಿಯಾಯಿತಿಯ ಮೊತ್ತದಲ್ಲಿ ತಮ್ಮ ಬ್ಯಾಂಕ್ ಸಾಲವನ್ನು ಪೂರ್ಣವಾಗಿ ಇತ್ಯರ್ಥ ಮಾಡಿಕೊಳ್ಳಬಹುದು. ಈ ಯೋಜನೆಯಿಂದ ಬಾಕಿ ಸಾಲ, ದಂಡ ಬಡ್ಡಿ ಮತ್ತು ಕಾನೂನು ತೊಂದರೆಗಳಿಂದ ಮುಕ್ತಿ ಪಡೆಯಲು ಅವಕಾಶ ದೊರೆಯುತ್ತದೆ. ಬ್ಯಾಂಕ್ OTS ಯೋಜನೆ ಎಂದರೇನು? OTS (One Time…

Read More